Kia Syros ಅನಾವರಣಕ್ಕೆ ದಿನಾಂಕ ನಿಗದಿ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ
ಕಿಯಾ syros ಗಾಗಿ rohit ಮೂಲಕ ನವೆಂಬರ್ 29, 2024 05:20 pm ರಂದು ಪ್ರಕಟಿಸಲಾಗಿದೆ
- 46 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಸಿರೋಸ್ ಅನ್ನು ಡಿಸೆಂಬರ್ 19 ರಂದು ಅನಾವರಣಗೊಳಿಸಲಾಗುವುದು ಮತ್ತು ಕಿಯಾದ ಭಾರತೀಯ ಕಾರುಗಳ ಪಟ್ಟಿಯಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ಎಸ್ಯುವಿಗಳ ನಡುವೆ ಸ್ಥಾನ ಪಡೆಯಲಿದೆ ಎಂದು ವರದಿಯಾಗಿದೆ
ನವೆಂಬರ್ ಆರಂಭದಲ್ಲಿ ಕಿಯಾ ತನ್ನ ಹೊಸ ಮತ್ತು ಮುಂಬರುವ ಎಸ್ಯುವಿಯ ಟೀಸರ್ ಅನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿತ್ತು. ಕಿಯಾ ಸಿರೋಸ್ ಎಂಬ ಹೊಸ ಮೊಡೆಲ್ ಭಾರತದಲ್ಲಿ ಡಿಸೆಂಬರ್ 19 ರಂದು ಅನಾವರಣವಾಗುವುದನ್ನು ಈಗ ಖಚಿತಪಡಿಸಲಾಗಿದೆ. ಕಿಯಾದ ಭಾರತೀಯ ರೇಂಜ್ನಲ್ಲಿ ಸೋನೆಟ್ ಮತ್ತು ಸೆಲ್ಟೋಸ್ ಎಸ್ಯುವಿಗಳ ನಡುವೆ ಸ್ಥಾನ ಪಡೆಯಲಿದೆ ಎಂದು ವರದಿಯಾಗಿದೆ. ಮುಂಬರುವ ಕಿಯಾದ ಎಸ್ಯುವಿ ಬಗ್ಗೆ ನಾವು ಇಲ್ಲಿಯವರೆಗೆ ತಿಳಿದಿರುವುದು ಇಲ್ಲಿದೆ:
ಕಿಯಾ ಸಿರೋಸ್ ಡಿಸೈನ್
ಈ ಹಿಂದೆ ಬಿಡುಗಡೆ ಮಾಡಲಾದ ಟೀಸರ್ಗಳನ್ನು ಗಮನಿಸಿದರೆ, ಅದರ ಲಂಬವಾಗಿ ಜೋಡಿಸಲಾದ 3-ಪಾಡ್ ಎಲ್ಇಡಿ ಹೆಡ್ಲೈಟ್ಗಳು ಮತ್ತು ಉದ್ದವಾದ ಎಲ್ಇಡಿ ಡಿಆರ್ಎಲ್ಗಳು, ದೊಡ್ಡ ವಿಂಡೋ ಪ್ಯಾನೆಲ್ಗಳು ಮತ್ತು ಸಿ-ಪಿಲ್ಲರ್ ಕಡೆಗೆ ವಿಂಡೋ ಬೆಲ್ಟ್ಲೈನ್ನಲ್ಲಿ ಬೆಂಡ್ ಅನ್ನು ನಾವು ಈಗಾಗಲೇ ನೋಡಿದ್ದೇವೆ. ಇದು ಉಬ್ಬಿದ ವೀಲ್ ಆರ್ಚ್ಗಳು, ಬಲವಾದ ಶೋಲ್ಡರ್ ಲೈನ್ಗಳು ಮತ್ತು ಫ್ಲಶ್-ಫಿಟ್ಟಿಂಗ್ ಡೋರ್ ಹ್ಯಾಂಡಲ್ಗಳನ್ನು ಹೊಂದಿದೆ ಎಂಬುದನ್ನು ನೀವು ಗಮನಿಸಬಹುದು. ಇತರ ಪ್ರಮುಖ ಹೊರಭಾಗದ ಹೈಲೈಟ್ಸ್ನಲ್ಲಿ ಉದ್ದವಾದ ರೂಫ್ ರೇಲ್ಸ್ಗಳು, ಎಲ್-ಆಕಾರದ ಟೇಲ್ ಲೈಟ್ಗಳು ಮತ್ತು ನೇರವಾದ ಟೈಲ್ಗೇಟ್ ಸೇರಿವೆ.
ಇದನ್ನೂ ಓದಿ: ಬಿಡುಗಡೆಗೆ ಮುಂಚಿತವಾಗಿಯೇ ಹೊಸ Honda Amazeನ ಫೋಟೋಗಳು ವೈರಲ್..!
Kia Syrosನ ಕ್ಯಾಬಿನ್ ಮತ್ತು ನಿರೀಕ್ಷಿತ ಫೀಚರ್ಗಳು
ಕಿಯಾ ಇನ್ನೂ ನಮಗೆ ಸಿರೋಸ್ನ ಕ್ಯಾಬಿನ್ನ ಕುರಿತ ಯಾವುದೇ ನೋಟವನ್ನು ನೀಡಿಲ್ಲವಾದರೂ, ಇದು ಸೋನೆಟ್ ಮತ್ತು ಸೆಲ್ಟೋಸ್ ಎಸ್ಯುವಿಗಳೊಂದಿಗೆ ಹೋಲಿಕೆಯನ್ನು ಹೊಂದಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಸಿರೋಸ್ ಡ್ಯುಯಲ್-ಟೋನ್ ಇಂಟೀರಿಯರ್ ಥೀಮ್ನೊಂದಿಗೆ ಬರಬಹುದು, ಆನ್ಲೈನ್ನಲ್ಲಿ ಕಂಡುಬರುವ ಕೆಲವು ಸ್ಪೈ ಶಾಟ್ಗಳು 2-ಸ್ಪೋಕ್ ಸ್ಟೀರಿಂಗ್ ವೀಲ್ ಇರುವಿಕೆಯನ್ನು ಬಹಿರಂಗಪಡಿಸುತ್ತವೆ.
ಫೀಚರ್ಗಳ ವಿಷಯದಲ್ಲಿ, ಇದು ಸೋನೆಟ್ ಮತ್ತು ಸೆಲ್ಟೋಸ್ನಲ್ಲಿ ಕಂಡುಬರುವ ರೀತಿಯ ಡ್ಯುಯಲ್-ಡಿಸ್ಪ್ಲೇ ಸೆಟಪ್, ಆಟೋ ಎಸಿ, ಪನರೋಮಿಕ್ ಸನ್ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು ಮತ್ತು ವೈರ್ಲೆಸ್ ಫೋನ್ ಚಾರ್ಜರ್ಅನ್ನು ಪಡೆಯಬಹುದು. ಸುರಕ್ಷತಾ ಫೀಚರ್ಗಳಲ್ಲಿ 6 ಏರ್ಬ್ಯಾಗ್ಗಳು (ಸ್ಟ್ಯಾಂಡರ್ಡ್ ಆಗಿ), ISOFIX ಚೈಲ್ಡ್ ಸೀಟ್ ಆಂಕಾರೇಜ್ಗಳು, ರಿವರ್ಸಿಂಗ್ ಕ್ಯಾಮೆರಾ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಸೇರಿವೆ.
ಕಿಯಾ ಸಿರೋಸ್ನ ಪವರ್ಟ್ರೇನ್ ಆಯ್ಕೆಗಳು
ಇನ್ನೂ ಅಧಿಕೃತವಾಗಿ ದೃಢೀಕರಿಸದಿದ್ದರೂ, ನಾವು Syros ಸೋನೆಟ್ನಂತೆಯೇ ಅದೇ ಎಂಜಿನ್ ಆಯ್ಕೆಗಳನ್ನು ಪಡೆಯಬಹುದೆಂದು ನಿರೀಕ್ಷಿಸುತ್ತಿದ್ದೇವೆ, ಅದರ ತಾಂತ್ರಿಕ ವಿಶೇಷಣಗಳು ಈ ಕೆಳಗಿನಂತಿವೆ:
ಎಂಜಿನ್ |
1.2-ಲೀಟರ್ N/A ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 ಪಿಎಸ್ |
120 ಪಿಎಸ್ |
116 ಪಿಎಸ್ |
ಟಾರ್ಕ್ |
115 ಎನ್ಎಮ್ |
172 ಎನ್ಎಮ್ |
250 ಎನ್ಎಮ್ |
ಗೇರ್ಬಾಕ್ಸ್ |
5-ಸ್ಪೀಡ್ ಮ್ಯಾನ್ಯುವಲ್ |
6-ಸ್ಪೀಡ್ iMT*, 7-ಸ್ಪೀಡ್ ಡಿಸಿಟಿ |
6-ಸ್ಪೀಡ್ ಮ್ಯಾನ್ಯುವಲ್, 6-ಸ್ಪೀಡ್ iMT*, 6-ಸ್ಪೀಡ್ ಆಟೋಮ್ಯಾಟಿಕ್ |
*iMT - ಇಂಟಲಿಜೆಂಟ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ (ಕ್ಲಚ್ಲೆಸ್ ಮ್ಯಾನ್ಯುಯಲ್)
^DCT- ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್
ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸಿರೋಸ್ ಆರಂಭಿಕ ಬೆಲೆಯು ರೂ 9 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ.
ನಿರಂತರ ಆಟೋಮೋಟಿವ್ ಅಪ್ಡೇಟ್ಗಳಿಗಾಗಿ ಕಾರ್ದೇಖೋ ವಾಟ್ಸ್ಆಪ್ ಚಾನೆಲ್ ಅನ್ನು ಫಾಲೋ ಮಾಡಿ