Kia Carnival ರಿವ್ಯೂ: ಹೆಚ್ಚಿನ ಬೆಲೆಗೆ ಸೂಕ್ತವಾದ ಮೌಲ್ಯವನ್ನು ಹೊಂದಿದೆಯೇ?
Published On ನವೆಂಬರ್ 19, 2024 By nabeel for ಕಿಯಾ ಕಾರ್ನಿವಲ್
- 1 View
- Write a comment
ಕಿಯಾ ಕಾರ್ನಿವಲ್ ಈಗ ಹಿಂದಿನ ಜನರೇಶನ್ಗಿಂತ ದುಪ್ಪಟ್ಟು ಬೆಲೆಯನ್ನು ಹೊಂದಿದೆ. ಆದರೂ ಮೌಲ್ಯಯುತವಾಗಿದೆಯೇ?
ಕಿಯಾ ಕಾರ್ನಿವಲ್ ಅತ್ಯುತ್ತಮ ವ್ಯಾನ್ ಆಗಿದೆ. ನಾನು ಎಮ್ಪಿವಿಗಳನ್ನು ಪ್ರೀತಿಸುತ್ತೇನೆ ಮತ್ತು ಇದು ನನ್ನ ಕನಸಿನ ಫ್ಯಾಮಿಲಿ ಕಾರು ಆಗಿದೆ. ಇದರಲ್ಲಿ ಉತ್ತಮವಾದ ಸ್ಥಳಾವಕಾಶ, ಸೌಕರ್ಯ, ಪ್ರಾಯೋಗಿಕತೆ, ಫೀಚರ್ಗಳು, ಬೂಟ್ ಸ್ಪೇಸ್, ನೀವು ಎಲ್ಲವನ್ನೂ ಪಡೆಯುತ್ತೀರಿ ಮತ್ತು ಮೇಲಿನ ಎಲ್ಲವನ್ನೂ ಕೇವಲ 35 ಲಕ್ಷ ರೂಗಳಲ್ಲಿ ಪಡೆಯುತ್ತೀರಿ! ಹೌದು, ಇದಕ್ಕಿಂತ ಹೆಚ್ಚೇನು ಇಲ್ಲ. ಆದರೆ, ಕಾರ್ನಿವಲ್ನ ಹೊಚ್ಚ ಹೊಸ ಜನರೇಶನ್ನ ಆಪ್ಡೇಟ್ ಅನ್ನು ಪಟೆಯುತ್ತಿದ್ದು, ಇದರ ಬೆಲೆ ಈಗ ಎಕ್ಸ್ ಶೋರೂಂ 64 ಲಕ್ಷ ರೂ.ಗೆ ಏರಿದೆ. ಈಗ ಇದರ ಆನ್ ರೋಡ್ ಬೆಲೆ ಸುಮಾರು 75 ಲಕ್ಷ ರೂ.ನಷ್ಟಿದೆ. ಅಂದರೆ ಅದರ ಬೆಲೆ ದುಪ್ಪಟ್ಟಾಗಿದೆ.
ಹಾಗಾದರೆ ಇದರ ಅನುಭವವೂ ದುಪ್ಪಟ್ಟಾಗಿದೆಯೇ? ಮತ್ತು ಐಷಾರಾಮಿ ಕಾರು ಖರೀದಿದಾರರು ಈ ಕಾರನ್ನು ಅದರ ಹಿಂದಿನ ಸೀಟಿನ ಅನುಭವಕ್ಕಾಗಿ ಪರಿಗಣಿಸಬೇಕೇ? ಈ ವಿಮರ್ಶೆಯಲ್ಲಿ ಕಂಡುಹಿಡಿಯೋಣ.
ನೋಟ
ಕಾರ್ನಿವಲ್ ಸಹ ಕಿಯಾದ ಫ್ಯಾಮಿಲಿ ಎಸ್ಯುವಿ ಲುಕ್ ಅನ್ನು ಬಳಸಿದೆ, ಆದರೆ ಕಾರ್ನಿವಲ್ನಂತೆ ಬೇರೆ ಯಾವುದೇ ಕಾರು ಅದಕ್ಕೆ ಸರಿಹೊಂದಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಇದು ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು ವಾಸ್ತವವಾಗಿ, ಪೂರ್ಣ ಗಾತ್ರದ ಎಸ್ಯುವಿಗಳಿಗಿಂತ ಉದ್ದ ಮತ್ತು ಅಗಲದ ವಿಷಯದಲ್ಲಿ ತುಂಬಾ ದೊಡ್ಡದಾಗಿದೆ. ಮತ್ತು ಇದರ ಎತ್ತರವು ಸ್ವಲ್ಪ ಕಡಿಮೆ ಇದ್ದು, ಅದನ್ನು ಸರಿದೂಗಿಸಲು ವಿನ್ಯಾಸದಲ್ಲಿ ಬಹಳಷ್ಟು ಉತ್ತಮ ಸಂಗತಿಗಳನ್ನು ಪಡೆಯುತ್ತದೆ.
ಇದು ತುಂಬಾ ಆಕ್ರಮಣಕಾರಿ ಗ್ರಿಲ್, ಆಕ್ರಮಣಕಾರಿ ಬಂಪರ್ ಅನ್ನು ಹೊಂದಿದೆ. ಹಾಗೆಯೇ, ಇದರ ಲೈಟಿಂಗ್ ಅಂಶಗಳು ಗಮನಿಸುವಾಗ, ಇದು ಸಾಕಷ್ಟು ಆಕರ್ಷಕವಾಗಿದೆ. ಇದರಲ್ಲಿ, ನೀವು ಎಲ್ಇಡಿ ಡಿಆರ್ಎಲ್ಗಳನ್ನು ಪಡೆಯುತ್ತೀರಿ, ನಂತರ ಕ್ವಾಡ್ ಹೆಡ್ಲ್ಯಾಂಪ್ ಘಟಕಗಳು ಬರುತ್ತವೆ, ಅದರಲ್ಲಿ ಮೇಲಿನ ಎರಡು ಲೋ-ಬೀಮ್ಗಳು ಮತ್ತು ಕೆಳಗಿನ ಎರಡು ಹೈ-ಬೀಮ್ಗಳಾಗಿವೆ. ನೀವು ಕ್ವಾಡ್ ಫಾಗ್ ಲ್ಯಾಂಪ್ಗಳನ್ನು ಸಹ ಪಡೆಯುತ್ತೀರಿ ಮತ್ತು ಈ ಎಲ್ಇಡಿ ಡಿಆರ್ಎಲ್ಗಳು ಸಹ ಇಂಡಿಕೇಟರ್ಗಳಾಗುತ್ತದೆ. ಆದರೆ ಅವುಗಳು ಡೈನಾಮಿಕ್ ಆಗಿದ್ದರೆ, ಇನ್ನೂ ಸ್ವಲ್ಪ ಚೆನ್ನಾಗಿರುತ್ತಿತ್ತು.
ಕಾರ್ನಿವಲ್ ಬಹಳ ಉದ್ದವಾದ ಕಾರು. ಎಷ್ಟು ಉದ್ದ? ಇದು ಸುಮಾರು 17 ಅಡಿ ಉದ್ದವಿದೆ. ಹಳೆಯ ಕಾರ್ನಿವಲ್ನಂತೆ, ಇಲ್ಲಿ ವಿನ್ಯಾಸವು ದುಂಡಾಗಿಲ್ಲ. ಆದರೆ ಸಾಕಷ್ಟು ನೇರ ಮತ್ತು ಶಾರ್ಪ್ ಆಗಿದೆ. ಬಲವಾದ ಶೋಲ್ಡರ್ ಲೈನ್, ಆಕ್ರಮಣಕಾರಿ ವೀಲ್ ಆರ್ಚ್ ಮತ್ತು ಆಕರ್ಷಕವಾದ ರೂಫ್ ರೇಲ್ಸ್ಗಳಿವೆ. ಹಿಂಭಾಗದಲ್ಲಿರುವ ಬೆಳ್ಳಿಯ ಭಾಗವೂ ಎದ್ದು ಕಾಣುತ್ತದೆ. ಮತ್ತು ಸಹಜವಾಗಿ, ಈ 18-ಇಂಚಿನ ಅಲಾಯ್ ವೀಲ್ಗಳು ಸಾಕಷ್ಟು ದಪ್ಪವಾಗಿದ್ದರೂ ಸಹ, ಇದರಲ್ಲಿ ತುಂಬಾ ಚಿಕ್ಕದಾಗಿ ಕಾಣುತ್ತವೆ.
ಕಾರ್ನಿವಲ್ನ ನಿಜವಾದ ಅಗಲವನ್ನು ಅರ್ಥಮಾಡಿಕೊಳ್ಳಲು ಹಿಂಭಾಗದಿಂದ ಗಮನಿಸಬೇಕಾಗುತ್ತದೆ. ವಿನ್ಯಾಸವನ್ನು ತುಂಬಾ ಸ್ವಚ್ಛವಾಗಿ ಇರಿಸಲಾಗಿದೆ. ತುಂಬಾ ಕ್ಲೀನ್ ಆಗಿದ್ದು, ವಾಸ್ತವವಾಗಿ, ನಿಮಗೆ ಅದರ ಟೈಲ್ಪೈಪ್ ಸಹ ನೋಡಲು ಸಿಗುವುದಿಲ್ಲ. ಟೈಲ್ ಲ್ಯಾಂಪ್ಗಳಲ್ಲಿನ ಎಲ್ಇಡಿ ಅಂಶಗಳು ಮುಂಭಾಗವನ್ನು ಚೆನ್ನಾಗಿ ಅನುಕರಿಸುತ್ತವೆ ಮತ್ತು ಬಹುತೇಕ ಕನೆಕ್ಟ್ ಸಹ ಆಗಿದೆ. ಈ ಕಾರಿನ ರೋಡ್ ಪ್ರೆಸೆನ್ಸ್ ಯಾವುದೇ ದೊಡ್ಡ ಎಸ್ಯುವಿಯನ್ನು ಸುಲಭವಾಗಿ ಮರೆಮಾಡಬಹುದು.
ಬೂಟ್ ಸ್ಪೇಸ್
ಕಾರ್ನೀವಲ್ಗೆ ಅದರ ಬೂಟ್ ಸ್ಪೇಸ್ ಯಾವಾಗಲೂ ದೊಡ್ಡ ಪ್ರಯೋಜನವಾಗಿದೆ. ಇದು ಎಷ್ಟು ದೊಡ್ಡ ಕಾರ್ ಅಂದರೆ, ಮೂರು ಸಾಲುಗಳ ಹಿಂದೆ ನೀವು ಎಲ್ಲಾ 5 ಪ್ರಯಾಣಿಕರಿಗೆ ಅಥವಾ ಹೆಚ್ಚಿನವರಿಗೆ ಬೇಕಾಗುವ ಲಗೇಜ್ಗಳನ್ನು ಇರಿಸಬಹುದು. ಒಂದು ವೇಳೆ ನೀವು ಮೂರನೇ ಸಾಲನ್ನು ಮಡಚಿದರೆ, ಸ್ಥಳಾವಕಾಶದಲ್ಲಿ ಯಾವುದೇ ಮಿತಿಯಿಲ್ಲ.
ಇದರ ಬೂಟ್ ಫ್ಲೋರ್ ಕೂಡ ಆಳವಾಗಿದೆ, ಏಕೆಂದರೆ ಈ ಕಾರಿನ ಸ್ಪೇರ್ ವೀಲ್ ಮಧ್ಯದ ಸಾಲಿನ ಕೆಳಗೆ ಸೆಟ್ ಮಾಡಲಾಗಿದೆ ಮತ್ತು ಬೂಟ್ನಲ್ಲಿ ಅಲ್ಲ. ಹಾಗಾಗಿ, ಹಿಂದಿನ ಸೀಟ್ಗಳು ಒಂದು ಕೈಯಿಂದ ಸುಲಭವಾಗಿ ಮಡಚಬಹುದು, ಈ ಕುಹರದೊಳಗೆ ಕುಳಿತುಕೊಳ್ಳುತ್ತದೆ ಮತ್ತು ನೀವು ಸಾಕಷ್ಟು ಜಾಗವನ್ನು ಪಡೆಯುತ್ತೀರಿ.
ಮೂರನೇ ಸಾಲಿನ ಸೀಟ್
ಕಾರ್ನಿವಲ್ನ ಮೂರನೇ ಸಾಲಿನ ಅನುಭವವು ಕೆಲವು ಕಾರುಗಳ ಎರಡನೇ ಸಾಲಿನ ಅನುಭವಕ್ಕಿಂತ ಉತ್ತಮವಾಗಿದೆ. ಈ ಸೀಟ್ಗಳು ಸಹ ವಿಶಾಲವಾಗಿವೆ. ಡ್ರೈವರ್ ಸೀಟ್ ಮತ್ತು ಪ್ಯಾಸೆಂಜರ್ ಸೀಟ್ ಅನ್ನು 6 ಅಡಿವರೆಗಿನ ಜನರಿಗೆ ಸರಿಹೊಂದಿಸಿದಾಗಲೂ, 6 ಅಡಿಗಳಷ್ಟು ಎತ್ತರದ ಪ್ರಯಾಣಿಕರಿಗೆ ಮೂರನೇ ಸಾಲಿನಲ್ಲಿಯೂ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಪಾದಗಳಿಗೆ ಮುಂಭಾಗದ ಸೀಟಿನ ಕೆಳಗೆ ಆರಾಮವಾಗಿ ಜಾರಲು ಸ್ಥಳಾವಕಾಶವಿದೆ ಮತ್ತು ರಿಕ್ಲೈನ್ ಆಂಗಲ್ ಅನ್ನು ಸಹ ಸರಿಹೊಂದಿಸಬಹುದು. ಸಾಮಾನ್ಯವಾಗಿ, ಈ ಸೀಟ್ಗಳು ಬೇಸ್ಗೆ ಸ್ವಲ್ಪ ಹತ್ತಿರದಲ್ಲಿವೆ, ಆದ್ದರಿಂದ ನೀವು ತೊಡೆಯ ಭಾಗದಲ್ಲಿ ಕಡಿಮೆ ಬೆಂಬಲವನ್ನು ಪಡೆಯುತ್ತೀರಿ. ಒಳ್ಳೆಯ ಅಂಶವೆಂದರೆ ಬೇಸ್ ಸ್ವಲ್ಪ ಮೇಲಕ್ಕೆ ಬಾಗಿರುತ್ತದೆ, ಆದ್ದರಿಂದ ನೀವು ಇಲ್ಲಿ ಬೆಂಬಲದ ಕೊರತೆಯನ್ನು ಅನುಭವಿಸುವುದಿಲ್ಲ. ವಾಸ್ತವವಾಗಿ, ಈ ಸೀಟ್ಗಳು ತುಂಬಾ ಅಗಲವಾಗಿದ್ದು, ಪ್ರಯಾಣಿಕರು ಹೆಚ್ಚು ಭಾರವಿಲ್ಲದಿದ್ದರೆ, ಇಲ್ಲಿ ಮೂರು ಜನರಿಗೆ ಆರಾಮವಾಗಿ ಕುಳಿತುಕೊಳ್ಳಬಹುದು. ಮತ್ತು ಇದರಲ್ಲಿ ಮೂವರು ಕುಳಿತುಕೊಂಡರೂ ಸಹ, ಎಲ್ಲಾ ಮೂರು ಜನರು ಇಲ್ಲಿ ಹೊಂದಾಣಿಕೆ ಮಾಡಬಹುದಾದ ಹೆಡ್ರೆಸ್ಟ್ಗಳನ್ನು ಪಡೆಯುತ್ತಾರೆ.