- + 9ಬಣ್ಣಗಳು
- + 19ಚಿತ್ರಗಳು
- shorts
- ವೀಡಿಯೋಸ್
ಎಂಜಿ ಹೆಕ್ಟರ್
change carಎಂಜಿ ಹೆಕ್ಟರ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 1451 cc - 1956 cc |
ಪವರ್ | 141.04 - 167.67 ಬಿಹೆಚ್ ಪಿ |
torque | 250 Nm - 350 Nm |
ಆಸನ ಸಾಮರ್ಥ್ಯ | 5 |
ಡ್ರೈವ್ ಟೈಪ್ | ಫ್ರಂಟ್ ವೀಲ್ |
mileage | 15.58 ಕೆಎಂಪಿಎಲ್ |
- powered ಮುಂಭಾಗ ಸೀಟುಗಳು
- ವೆಂಟಿಲೇಟೆಡ್ ಸೀಟ್‌ಗಳು
- ambient lighting
- ಎತ್ತರ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್
- ಡ್ರೈವ್ ಮೋಡ್‌ಗಳು
- ಕ್ರುಯಸ್ ಕಂಟ್ರೋಲ್
- ಏರ್ ಪ್ಯೂರಿಫೈಯರ್
- ಸ್ಬಯಂಚಾಲಿತ ಹವಾಮಾನ ನಿಯಂತ್ರಣ
- 360 degree camera
- ಸನ್ರೂಫ್
- adas
- key ವಿಶೇಷಣಗಳು
- top ವೈಶಿಷ್ಟ್ಯಗಳು
ಹೆಕ್ಟರ್ ಇತ್ತೀಚಿನ ಅಪ್ಡೇಟ್
ಎಂಜಿ ಹೆಕ್ಟರ್‌ನ ಬೆಲೆ ಎಷ್ಟು?
ದೆಹಲಿಯಲ್ಲಿ ಎಂಜಿ ಹೆಕ್ಟರ್‌ನ ಎಕ್ಸ್ ಶೋರೂಂ ಬೆಲೆ 13.99 ಲಕ್ಷ ರೂ.ನಿಂದ 22.24 ಲಕ್ಷ ರೂ.ವರೆಗೆ ಇದೆ. ).
ಎಂಜಿ ಹೆಕ್ಟರ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ?
ಎಮ್‌ಜಿ ಹೆಕ್ಟರ್ ಸ್ಟೈಲ್, ಶೈನ್ ಪ್ರೊ, ಸೆಲೆಕ್ಟ್ ಪ್ರೊ, ಸ್ಮಾರ್ಟ್ ಪ್ರೊ, ಶಾರ್ಪ್ ಪ್ರೊ ಮತ್ತು ಸ್ಯಾವಿ ಪ್ರೊ ಎಂಬ ಆರು ವಿಶಾಲ ಆವೃತ್ತಿಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಎಮ್‌ಜಿಗೆ 100-ವರ್ಷ ಪೂರೈಸಿರುವ ವಿಶೇಷವಾಗಿ, ಹೆಕ್ಟರ್ ಶಾರ್ಪ್ ಪ್ರೊ ವೇರಿಯೆಂಟ್ ಆನ್ನು ಆಧರಿಸಿ 100-ಇಯರ್ ಸ್ಪೆಷಲ್ ಎಡಿಷನ್ ಅನ್ನು ಸಹ ಪರಿಚಯಿಸಲಾಗಿದೆ.
ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ವೇರಿಯೆಂಟ್ ಯಾವುದು ?
ನೀವು ಸೀಮಿತ ಬಜೆಟ್‌ನಲ್ಲಿದ್ದರೆ ಬೇಸ್ ವೇರಿಯಂಟ್‌ನ ಮೇಲಿರುವ ಶೈನ್ ಪ್ರೊ ಉತ್ತಮ ಆಯ್ಕೆಯಾಗಿದೆ, ಏಕೆಂದರೆ ಇದು ಎಲ್ಇಡಿ ಲೈಟಿಂಗ್ ಸೆಟಪ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 6-ಸ್ಪೀಕರ್‌ಗಳ ಸಿಸ್ಟಮ್ ಮತ್ತು ಸಿಂಗಲ್ ಪೇನ್ ಸನ್‌ರೂಫ್‌ನಂತಹ ಫೀಚರ್‌ಗಳ ಸಾಲಿಡ್ ಪಟ್ಟಿಯನ್ನು ಹೊಂದಿದೆ. ಮತ್ತೊಂದೆಡೆ, ಸೆಲೆಕ್ಟ್ ಪ್ರೊ ನಮ್ಮ ಪ್ರಕಾರ ನೀಡುವ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುವ ಆವೃತ್ತಿಯಾಗಿದೆ, ಏಕೆಂದರೆ ಇದು ಕನೆಕ್ಟೆಡ್ ಫೀಚರ್‌ಗಳು, 8-ಸ್ಪೀಕರ್ ಸೆಟಪ್ ಮತ್ತು ಪನರೋಮಿಕ್ ಸನ್‌ರೂಫ್ ಅನ್ನು ನೀಡುತ್ತದೆ. ಆದರೆ ಇದು ADAS, ಸೈಡ್ ಮತ್ತು ಕರ್ಟನ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಕೆಲವು ಸುರಕ್ಷತೆ ಮತ್ತು ಸೌಕರ್ಯದ ಫೀಚರ್‌ಗಳನ್ನು ನೀಡುವುದಿಲ್ಲ.
ಎಂಜಿ ಹೆಕ್ಟರ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
MG ಹೆಕ್ಟರ್ ಆಟೋ-ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಫಾಗ್ ಲ್ಯಾಂಪ್‌ಗಳು, 18-ಇಂಚಿನ ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಮತ್ತು ದೊಡ್ಡ ಪನರೋಮಿಕ್ ಸನ್‌ರೂಫ್‌ನಂತಹ ಪ್ರಭಾವಶಾಲಿ ರೇಂಜ್‌ನ ಫೀಚರ್‌ಗಳೊಂದಿಗೆ ಬರುತ್ತದೆ.
ಒಳಭಾಗದಲ್ಲಿ, ಇದು ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 14-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 7-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿದೆ. ಚಾಲಕನು 6-ವೇ ಚಾಲಿತ ಸೀಟನ್ನು ಪಡೆಯುತ್ತಾನೆ ಮತ್ತು ಮುಂಭಾಗದ ಪ್ರಯಾಣಿಕರು 4-ವೇ ಚಾಲಿತ ಸೀಟ್ ಅನ್ನು ಪಡೆಯುತ್ತಾರೆ. ಇತರ ಫೀಚರ್‌ಗಳೆಂದರೆ ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಚಾಲಿತ ಟೈಲ್‌ಗೇಟ್. ಆಡಿಯೋ ಸಿಸ್ಟಮ್, ಟ್ವೀಟರ್‌ಗಳು ಸೇರಿದಂತೆ 8 ಸ್ಪೀಕರ್‌ಗಳನ್ನು ಒಳಗೊಂಡಿದೆ ಮತ್ತು ಸಬ್ ವೂಫರ್ ಮತ್ತು ಆಂಪ್ಲಿಫೈಯರ್ ಅನ್ನು ಸಹ ಒಳಗೊಂಡಿದೆ.
ಇದು ಎಷ್ಟು ವಿಶಾಲವಾಗಿದೆ?
ಹೆಕ್ಟರ್ ಐದು ಪ್ರಯಾಣಿಕರಿಗೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ, ಉದಾರವಾದ ಹೆಡ್‌ರೂಮ್, ಲೆಗ್‌ರೂಮ್, ಮೊಣಕಾಲು ಇಡುವಲ್ಲಿ ಜಾಗ ಮತ್ತು ತೊಡೆಯ ಕೆಳಭಾಗದ ಬೆಂಬಲವನ್ನು ನೀಡುತ್ತದೆ. ಇದರ ವಿಶಾಲವಾದ ಕ್ಯಾಬಿನ್ ಅನ್ನು ಬಿಳಿ ಕ್ಯಾಬಿನ್ ಥೀಮ್ ಮತ್ತು ದೊಡ್ಡ ಕಿಟಕಿಗಳಿಂದ ವರ್ಧಿಸಲಾಗಿದೆ. ಎಮ್‌ಜಿಯು ಅಧಿಕೃತ ಬೂಟ್ ಸ್ಪೇಸ್ ಅಂಕಿಅಂಶಗಳನ್ನು ಬಹಿರಂಗಪಡಿಸದಿದ್ದರೂ, ಹೆಕ್ಟರ್ ನಿಮ್ಮ ಎಲ್ಲಾ ಲಗೇಜ್‌ಗಳಿಗೆ ದೊಡ್ಡ ಬೂಟ್ ಲೋಡಿಂಗ್ ಸಾಮರ್ಥ್ಯವನ್ನು ನೀಡುತ್ತದೆ. ನೀವು ದೊಡ್ಡ ಕುಟುಂಬವನ್ನು ಹೊಂದಿದ್ದರೆ, ನೀವು 6- ಮತ್ತು 7-ಸೀಟರ್ ವೇರಿಯೆಂಟ್ ಅನ್ನು ಸಹ ಆಯ್ಕೆ ಮಾಡಬಹುದು, ಅಂದರೆ ಹೆಕ್ಟರ್ ಪ್ಲಸ್.
ಯಾವ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದೆ?
ಹೆಕ್ಟರ್‌ಗೆ ಎರಡು ಎಂಜಿನ್‌ಗಳ ಆಯ್ಕೆಯನ್ನು ಒದಗಿಸಲಾಗಿದೆ:
-
1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (143 ಪಿಎಸ್/250 ಎನ್‌ಎಮ್)
-
2-ಲೀಟರ್ ಡೀಸೆಲ್ ಎಂಜಿನ್ (170 ಪಿಎಸ್/350 ಎನ್‌ಎಮ್).
ಎರಡೂ ಎಂಜಿನ್‌ಗಳನ್ನು 6-ಸ್ಪೀಡ್ ಮ್ಯಾನ್ಯುವಲ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ, ಆದರೆ ಪೆಟ್ರೋಲ್ ಎಂಜ್‌ನ್ ಅನ್ನು ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯೊಂದಿಗೆ ಸಹ ನೀಡಲಾಗುತ್ತದೆ.
ಎಂಜಿ ಹೆಕ್ಟರ್‌ನ ಮೈಲೇಜ್ ಎಷ್ಟು?
ಎಮ್‌ಜಿ ಹೆಕ್ಟರ್‌ನ ಅಧಿಕೃತ ಮೈಲೇಜ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ ಮತ್ತು ಎಮ್‌ಜಿಯ ಈ ಎಸ್‌ಯುವಿಯ ರಿಯಲ್ ಟೈಮ್‌ನ ಇಂಧನ ದಕ್ಷತೆಯನ್ನು ಪರೀಕ್ಷಿಸಲು ನಮಗೆ ಅವಕಾಶ ಸಿಕ್ಕಿಲ್ಲ.
ಎಂಜಿ ಹೆಕ್ಟರ್ ಎಷ್ಟು ಸುರಕ್ಷಿತವಾಗಿದೆ?
ಹೆಕ್ಟರ್ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಅನ್ನು ಪಡೆಯುತ್ತದೆ. ಟಾಪ್-ಎಂಡ್ ಆವೃತ್ತಿಗಳು ಲೇನ್ ನಿರ್ಗಮನ ಎಚ್ಚರಿಕೆ, ಲೇನ್ ಕೀಪ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್ ಮತ್ತು ಆಟೋನೊಮಸ್ ಎಮೆರ್ಜೆನ್ಸಿ ಬ್ರೇಕಿಂಗ್‌ನಂತಹ ಸುಧಾರಿತ ಚಾಲಕ ಸಹಾಯ ಸಿಸ್ಟಮ್‌ಗಳೊಂದಿಗೆ (ADAS) ಸಜ್ಜುಗೊಂಡಿವೆ. ಆದರೆ, ಹೆಕ್ಟರ್ ಅನ್ನು ಭಾರತ್ ಎನ್‌ಸಿಎಪಿ ಇನ್ನೂ ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿಲ್ಲ, ಆದ್ದರಿಂದ ಸುರಕ್ಷತೆಯ ರೇಟಿಂಗ್‌ಗಾಗಿ ನಾವು ಕಾಯುತ್ತಿದ್ದೇವೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
ಎಮ್‌ಜಿ ಹೆಕ್ಟರ್ ಆರು ಮೊನೊಟೋನ್ ಬಣ್ಣಗಳಲ್ಲಿ ಮತ್ತು ಒಂದು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ: ಹವಾನಾ ಗ್ರೇ, ಕ್ಯಾಂಡಿ ವೈಟ್, ಗ್ಲೇಜ್ ರೆಡ್, ಅರೋರಾ ಸಿಲ್ವರ್, ಸ್ಟಾರಿ ಬ್ಲ್ಯಾಕ್, ಡ್ಯೂನ್ ಬ್ರೌನ್, ಮತ್ತು ಡ್ಯುಯಲ್-ಟೋನ್ ವೈಟ್ & ಬ್ಲ್ಯಾಕ್. ಹೆಕ್ಟರ್‌ನ ಸ್ಪೇಷಲ್ ಎಡಿಷನ್ ಎವರ್‌ಗ್ರೀನ್ ಬಾಡಿ ಕಲರ್‌ನಲ್ಲಿ ಬರುತ್ತದೆ.
ನಾವು ವಿಶೇಷವಾಗಿ ಇಷ್ಟಪಟ್ಟ ಬಣ್ಣ: ಹೆಕ್ಟರ್ ಅದರ ಗ್ಲೇಜ್ ರೆಡ್ ಬಣ್ಣದ ಆಯ್ಕೆಯಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ, ಏಕೆಂದರೆ ಅದರ ಒಟ್ಟಾರೆ ಪ್ರೊಫೈಲ್ ಈ ಬಣ್ಣದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ನೀವು 2024 MG ಹೆಕ್ಟರ್ ಅನ್ನು ಖರೀದಿಸಬೇಕೇ?
MG ಹೆಕ್ಟರ್ ಉತ್ತಮ ರೋಡ್ ಪ್ರೆಸೆನ್ಸ್, ವಿಶಾಲವಾದ ಮತ್ತು ಆರಾಮದಾಯಕ ಕ್ಯಾಬಿನ್, ಉತ್ತಮ ಫೀಚರ್‌ಗಳ ಸೆಟ್, ಸಾಕಷ್ಟು ಬೂಟ್ ಸ್ಪೇಸ್ ಮತ್ತು ಸಾಲಿಡ್ ಪರ್ಫಾರ್ಮೆನ್ಸ್ ಅನ್ನು ನೀಡುತ್ತದೆ. ಇದು ನಿಮಗಾಗಿ ಅಥವಾ ಹಿಂಬದಿಯಲ್ಲಿ ಆರಾಮವಾಗಿ ಕುಳಿತು ಪ್ರಯಾಣಿಸಲು ಬಯಸುವವರಿಗೆ ಇದು ಪರಿಪೂರ್ಣ ಫ್ಯಾಮಿಲಿ ಎಸ್‌ಯುವಿ ಆಗಬಹುದು.
ನನ್ನ ಪರ್ಯಾಯಗಳು ಯಾವುವು?
ಎಮ್‌ಜಿಯು 6 ಮತ್ತು 7 ಸೀಟರ್ ಆಯ್ಕೆಗಳೊಂದಿಗೆ ಹೆಕ್ಟರ್ ಅನ್ನು ಸಹ ನೀಡುತ್ತದೆ, ಇದಕ್ಕಾಗಿ ನೀವು ಹೆಕ್ಟರ್ ಪ್ಲಸ್ ಅನ್ನು ಪರಿಶೀಲಿಸಬಹುದು. ಹೆಕ್ಟರ್ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ700 ನ 5-ಸೀಟರ್ ಆವೃತ್ತಿಗಳು ಮತ್ತು ಹ್ಯುಂಡೈ ಕ್ರೆಟಾ ಹಾಗು ಕಿಯಾ ಸೆಲ್ಟೋಸ್‌ನ ಟಾಪ್-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಹೆಕ್ಟರ್ ಸ್ಟೈಲ್(ಬೇಸ್ ಮಾಡೆಲ್)1451 cc, ಮ್ಯಾನುಯಲ್, ಪೆಟ್ರೋಲ್, 13.79 ಕೆಎಂಪಿಎಲ್ | Rs.14 ಲಕ್ಷ* | ||
ಹೆಕ್ಟರ್ ಶೈನ್ ಪ್ರೊ1451 cc, ಮ್ಯಾನುಯಲ್, ಪೆಟ್ರೋಲ್, 13.79 ಕೆಎಂಪಿಎಲ್ | Rs.16.41 ಲಕ್ಷ* | ||